ಜಿಲ್ಲೆಗೆ ಬಾರದ ಲಸಿಕೆ

ದಾವಣಗೆರೆ, ಮೇ 6 – ಜಿಲ್ಲೆಗೆ ಗುರುವಾರ ರಾಜ್ಯ ಸರ್ಕಾರ ದಿಂದ ಲಸಿಕೆ ಪೂರೈಕೆ ಆಗಿಲ್ಲ. ಇದರಿಂ ದಾಗಿ ಶುಕ್ರವಾರ ದಂದು ನಗರದಲ್ಲಿ ಲಸಿಕೆ ಲಭ್ಯವಾಗುವ ಸಾಧ್ಯತೆ ಇಲ್ಲ. ಜಿಲ್ಲೆಯಲ್ಲಿ ಗುರು ವಾರ 2,300 ರಷ್ಟು ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗಿದೆ. ಹಲವಾರು ಗ್ರಾಮೀಣ ಭಾಗದ ಪಿ.ಹೆಚ್‌.ಸಿ.ಗಳಲ್ಲಿ 800ರಷ್ಟು ಲಸಿಕೆಗಳು ಉಳಿದಿವೆ ಎಂದು ಜಿಲ್ಲಾ ಕೋವಿಡ್ ಲಸಿಕಾ ನೋಡಲ್ ಅಧಿಕಾರಿ ಯಾಗಿರುವ ಡಾ. ಕೆ.ಎಸ್. ಮೀನಾಕ್ಷಿ ತಿಳಿಸಿದ್ದಾರೆ.

ಯಾವ ಪಿ.ಎ.ಸಿ.ಗಳಲ್ಲಿ ಲಸಿಕೆ ಉಳಿದಿದೆಯೋ ಅವರು ಮಾತ್ರ ನಾಳೆ ಶುಕ್ರವಾರ ಲಸಿಕೆ ನೀಡಲಿದ್ದಾರೆ ಎಂದಿರುವ ಅವರು, ಕೋವ್ಯಾಕ್ಸಿನ್ ಲಸಿಕೆ ಇನ್ನೂ ಜಿಲ್ಲೆಗೆ ಬಂದಿಲ್ಲ ಎಂದಿದ್ದಾರೆ.

Leave a Reply

Your email address will not be published.