ಯುವ ಪೀಳಿಗೆಗೆ ಸ್ವಾತಂತ್ರ್ಯ ಇತಿಹಾಸದ ಅರಿವು ಅಗತ್ಯ

ಯುವ ಪೀಳಿಗೆಗೆ ಸ್ವಾತಂತ್ರ್ಯ ಇತಿಹಾಸದ ಅರಿವು ಅಗತ್ಯ

ಜಗಳೂರು, ಏ.4 – ದೇಶದ ಸ್ವಾತಂತ್ರ್ಯ ಕ್ಕಾಗಿ ಜೀವನ ಮುಡಿಪಾಗಿಟ್ಟು ಹೋರಾಡಿದ ಮಹನೀಯರ‌ ಆದರ್ಶಗಳ ಬಗ್ಗೆ ವಿದ್ಯಾರ್ಥಿ, ಯುವ ಸಮೂಹದಲ್ಲಿ ಅರಿವು ಮೂಡಿಸುವುದು  ಅಗತ್ಯ ಎಂದು ವಾಲ್ಮೀಕಿ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್ .ವಿ.ರಾಮಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂ ಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ದಾವಣಗೆರೆ ಹಾಗೂ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ ಜಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟು ಮಹಾತ್ಮ ಗಾಂಧಿಜೀ, ಸೇರಿದಂತೆ ಅನೇಕ ಮಹನೀಯರ  ಅಹಿಂಸಾ ಮಾರ್ಗದ ಹೋರಾ ಟದ ಫಲವಾಗಿ ಸ್ವಾತಂತ್ರ್ಯ ದೊರೆತಿದೆ. ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಕೊಡುಗೆಯಿಂದ ದೇಶ ಸುವ್ಯವಸ್ಥಿತ‌ ಪ್ರಜಾಪ್ರ ಭುತ್ವ ಆಡಳಿತ ಹೊಂದಿದೆ. ಅಲ್ಲದೆ ನನ್ನನ್ನೊಳ ಗೊಂಡಂತೆ ಜನಪ್ರತಿನಿಧಿಗಳು ಆಯ್ಕೆಯಾಗಿ ದ್ದೇವೆ. ಅತ್ಯುನ್ನತ ಶಿಕ್ಷಣ ಪಡೆದ ಬಾಬಾಸಾಹೇ ಬರಂತಹ ಮಹಾಪುರುಷರಿಗೆ  ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಸಲಹೆ ನೀಡಿದರು.

ನೀರಾವರಿ ಕನಸು ನನಸು; ರೈತರ ಬದುಕು ಹಸನ:  ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಕೆರೆ ನೀರು ತುಂಬಿಸುವ ಯೋಜನೆ ಕಾಮಗಾರಿ ಭರದಿಂದ ಸಾಗಿದ್ದು ಶೀಘ್ರದಲ್ಲಿ ಕೆರೆಗಳಿಗೆ ನೀರು ಭರ್ತಿಯಾಗಲಿದೆ ಹಾಗೂ ಕನಸಿನ ಕೂಸಾದ ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯನ್ನಾಗಿ ಅನುಮೋದನೆ ನೀಡಿದ ಫಲವಾಗಿ ತಾಲ್ಲೂಕಿಗೆ 1200 ಕೋಟಿ ರೂ ಅನುದಾನ ದೊರೆಯಲಿದೆ. 2.4 ಟಿಎಂಸಿ ನೀರು ಹರಿದುಬರಲಿದ್ದು 45 ಸಾವಿರ ಎಕರೆ ಪ್ರದೇಶ ಹನಿನೀರಾವರಿಯಾಗಲಿದೆ. 9 ಕೆರೆಗಳು ಮೈದುಂಬಲಿವೆ. ಇದರಿಂದ ತಾಲ್ಲೂಕು ಹಸಿರು ನಾಡಾಗಿ ಕಂಗೊಳಿಸಿ ದಶಕಗಳ ಕನಸು ನನಸಾಗಿ ರೈತರ ಬದುಕು ಹಸನಾಗಲಿದೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.

ಕೊರೊನಾ ಪುನಃ ಆಕ್ರಮಿಸುತ್ತಿದ್ದು ಜಾಗೃತ ರಾಗಿರಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾ ಜಿಕ ಅಂತರ ಕಾಪಾಡಿಕೊಳ್ಳಿ. ಪುನಃ ಲಾಕ್ ಡೌನ್ ಹಂತ ತಲುಪುವುದು ಬೇಡ ಮುಂಜಾ ಗ್ರತೆ ವಹಿಸಿರಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣ ಪಂಚಾಯಿತಿಯಿಂದ ಮಹಾತ್ಮಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತಾಲ್ಲೂಕು ಪಂಚಾಯಿತಿವರೆಗೆ ಘೋಷವಾಕ್ಯವುಳ್ಳ ಪ್ಲ ಕಾರ್ಡ್‍ಗಳನ್ನು ಹಿಡಿದು ಜಾಥಾ ನಡೆಸಲಾಯಿತು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಎಸ್.ಕೆ.ಮಂಜುನಾಥ್, ಪ.ಪಂ ಅಧ್ಯಕ್ಷ ಆರ್. ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಲಲಿತಾ ಶಿವಣ್ಣ, ತಾ.ಪಂ ಸದಸ್ಯರಾದ ಮರೇನಹಳ್ಳಿ ಬಸವರಾಜ್, ಶಂಕರನಾಯ್ಕ, ತಿಮ್ಮೇಶ್, ಪ.ಪಂ ಸದಸ್ಯರಾದ ಪಾಪಲಿಂಗಪ್ಪ, ರೇವಣ್ಣ, ಮಂಜಮ್ಮ, ಲುಕ್ಮಾನ್‍ಖಾನ್, ಲೋಲಾಕ್ಷಮ್ಮ, ವಿಶಾಲಾಕ್ಷಿ, ನಿರ್ಮಲ, ನಾಮನಿರ್ದೇಶನ ಸದಸ್ಯರಾದ ರುದ್ರಮುನಿ, ಬಿ.ಪಿ ಸುಭಾನ್‌, ತಹಶೀಲ್ದಾರ್ ಡಾ.ನಾಗವೇಣಿ, ತಾ.ಪಂ ಇಓ ಮಲ್ಲಾನಾಯ್ಕ, ಪ.ಪಂ ಮುಖ್ಯಾಧಿಕಾರಿ ರಾಜು.ಡಿ ಬಣಕಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಭಾಗವಹಿಸಿದ್ದರು.

Leave a Reply

Your email address will not be published.