ಪ್ರವಾಸಿ ತಾಣದಂತಿರುವ ರೈಲ್ವೆ ನಿಲ್ದಾಣ

ಪ್ರವಾಸಿ ತಾಣದಂತಿರುವ ರೈಲ್ವೆ ನಿಲ್ದಾಣ

ದಾವಣಗೆರೆ, ಏ. 4 – ಅತ್ಯಾಧುನಿಕ ನವೀಕೃತ ರೈಲ್ವೆ ನಿಲ್ದಾಣ  ದಾವಣಗೆರೆ ಜಿಲ್ಲೆಗೊಂದು ಪ್ರವಾಸಿ ತಾಣದಂತಾಗಿದೆ ಎಂದು ದಾವಣಗೆರೆ ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಹರ್ಷ ವ್ಯಕ್ತಪಡಿಸಿದರು. ನವೀಕೃತ ರೈಲ್ವೆ ನಿಲ್ದಾಣ ದ ಉದ್ಘಾಟನೆ ಸಂದರ್ಭದಲ್ಲಿ ನಡೆದ ಸೌಹಾರ್ದ ಕೂಟ ಸಮಾರಂಭದಲ್ಲಿ ಸಂಸದ ಜಿಎಂ.ಸಿದ್ದೇಶ್ವರ ಅವರಿಗೆ ಗೌರವಾರ್ಪಣೆ ಅರ್ಪಿಸಿ‌ದ ದಾವಣಗೆರೆ ‌‌ಶೋಷಿತ ವರ್ಗಗಳ ಒಕ್ಕೂಟದ ಬಾಡದ ಆನಂದರಾಜ್ ನೇತೃತ್ವದಲ್ಲಿ ಸಂಸದರನ್ನು ಅಭಿನಂದಿಸಿದರು. ಸಿ.ವಿ. ನರೇಂದ್ರಕುಮಾರ್, ಬಾಬು, ಮುರುಳಿ ಯಾದವ್, ಮಂಜುನಾಯ್ಕ್, ಸಂತೋಷಕುಮಾರ್ ಮತ್ತಿತರರು ಇದ್ದರು.

Leave a Reply

Your email address will not be published.