ಅನಧಿಕೃತವಾಗಿ ತಲೆ ಎತ್ತಿದ ಪ್ರಾರ್ಥನಾ ಮಂದಿರ: ಆರೋಪ

ಪೊಲೀಸರೊಂದಿಗೆ ಹಿಂಜಾವೇ ದಿಢೀರ್ ದಾಳಿ

ದಾವಣಗೆರೆ, ಏ.4- ಪರವಾನಗಿ ಇಲ್ಲದೇ ಪ್ರಾರ್ಥನಾ ಮಂದಿರ ನಡೆಸುತ್ತಿರುವುದಾಗಿ ಆರೋಪಿಸಿ, ನಗರದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಪೊಲೀಸರೊಂದಿಗೆ ದಿಢೀರ್ ದಾಳಿ ನಡೆಸಿರುವ ಘಟನೆ ಇಂದು ನಡೆದಿದೆ.

ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದವೀರಪ್ಪ ಬಡಾವಣೆಯ ಎಲ್.ಜಿ. ಕಾಂಪ್ಲೆಕ್ಸ್‌ನಲ್ಲಿ ರಾಜಾರೋಷವಾಗಿ ಬೋರ್ಡ್ ಹಾಕಿಕೊಂಡು‌ ಪರ ವಾನಗಿ ಇಲ್ಲದೇ ಅನಧಿಕೃತವಾಗಿ ಪ್ರಾರ್ಥನಾ ಮಂದಿರ ನಡೆಸುತ್ತಿದ್ದು, ಮತಾಂತರಕ್ಕಾಗಿ ಪ್ರಾರ್ಥನಾ ಮಂದಿರದ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿ ಪೊಲೀಸರೊಂದಿಗೆ ಪ್ರಾರ್ಥನಾ ಮಂದಿರಕ್ಕೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ದಿಢೀರ್ ದಾಳಿ ನಡೆಸಿದ್ದಾರೆ. 100 ಕ್ಕೂ ಹೆಚ್ಚು ಮಹಿಳೆಯರು ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರವಿಲ್ಲದೇ ಪ್ರಾರ್ಥನೆ ನಡೆ ಸುತ್ತಿದ್ದನ್ನು ತಡೆಯಲು ಮುಂದಾದ ಹಿಂಜಾವೇ ಕಾರ್ಯ ಕರ್ತರ ಹಾಗೂ ಪ್ರಾರ್ಥನೆ ಮಾಡುತ್ತಿದ್ದ ಮಹಿಳೆಯರ ಮಧ್ಯೆ ಮಾತಿನ‌ ಚಕಮಕಿ ನಡೆದಿದೆ ಎನ್ನಲಾಗಿದೆ.

ಪ್ರಾರ್ಥನಾ ಮಂದಿರದ ದಾಖಲೆಗಳನ್ನು ಸಲ್ಲಿಸುವಂತೆ, ವಿದ್ಯಾನಗರ ಪೊಲೀಸರು ಸೂಚನೆ ನೀಡಿದ್ದಾರೆಂದು ಹೇಳಲಾಗಿದೆ.

Leave a Reply

Your email address will not be published.