ಸಿರಿಗೆರೆಯಲ್ಲಿಂದು ತರಳಬಾಳು ಹುಣ್ಣಿಮೆ ‘ಲೈವ್’

ಸಿರಿಗೆರೆಯಲ್ಲಿಂದು ತರಳಬಾಳು ಹುಣ್ಣಿಮೆ ‘ಲೈವ್’

ಕೊರೊನಾ ಹಿನ್ನೆಲೆಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಸರಳವಾಗಿ ಆಚರಿಸಲು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತೆಗೆದುಕೊಂಡ ನಿರ್ಧಾರದಂತೆ ಸಿರಿಗೆರೆಯಲ್ಲಿ ಸರಳವಾಗಿ ಆನ್‌ಲೈನ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ತರಳಬಾಳು ಹುಣ್ಣಿಮೆ ಮಹೋತ್ಸವ ವನ್ನು ನಾಡಿನ ಒಳ-ಹೊರಗೆ ಆಚರಿಸಿ, ಸರ್ವಜನಾಂಗದ ಶಾಂತಿಯ ತೋಟವ ನ್ನಾಗಿ ಮಾಡಿದವರು ಹಿಂದಿನ ಜಗದ್ಗುರು ಗಳಾದ ಶ್ರೀ ಶಿವಕುಮಾರ ಸ್ವಾಮಿಗಳು. 

ಈಗಿನ ಶ್ರೀಗಳು ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಲು ತೀರ್ಮಾನಿಸಿದ್ದು, ಭಕ್ತಾದಿಗಳು ಮತ್ತು ಅಭಿಮಾನಿಗಳೆಲ್ಲರೂ ಸ್ವಾಗತಿಸಿದ್ದಾರೆ.

ಕೊಟ್ಟೂರಿನಲ್ಲಿ ಈ ವರ್ಷ ವೈಭವಯುತವಾಗಿ ನಡೆಯಬೇಕಾಗಿದ್ದ ಹುಣ್ಣಿಮೆ ಮಹೋತ್ಸವವನ್ನು ಮುಂದೂಡಿದ್ದು, ಪೀಠದ ಪರಂಪರೆ ಮತ್ತು ಸಮಸ್ತ ಶಿಷ್ಯವೃಂದದ ಭಕ್ತಿ, ಭಾವನೆಗಳನ್ನು ಗೌರವಿಸುವ ದೃಷ್ಟಿಯಿಂದ ಮಠದ ಶ್ರೀ ಗುರು ಶಾಂತೇಶ್ವರ ದಾಸೋಹ ಭವನದ ಮುಂಭಾಗದಲ್ಲಿ ಇಂದು ಸಂಜೆ  7.30 ಕ್ಕೆ ಶ್ರೀಗಳು ಸದ್ಧರ್ಮ ಸಿಂಹಾಸನಾರೋಹಣ ಮಾಡಿ ಆಶೀರ್ವಚನ ನೀಡಲಿದ್ದಾರೆ.

ಹುಣ್ಣಿಮೆ ಕಾರ್ಯಕ್ರಮವನ್ನು ಎಂದಿನಂತೆ ಭಕ್ತಾದಿಗಳು ಮನೆಯಲ್ಲಿಯೇ ಇದ್ದು, ಅಂತರ್ಜಾಲದಲ್ಲಿ ವೀಕ್ಷಣೆ ಮಾಡಬಹುದಾಗಿದೆ. (You Tube: Taralabalu Math Sirigere)

Leave a Reply

Your email address will not be published.