ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ

ಹರಿಹರದಲ್ಲಿನ ಶಿಕ್ಷಕರ ದಿನಾಚರಣೆಯಲ್ಲಿ ಶಾಸಕ ಎಸ್. ರಾಮಪ್ಪ

ಹರಿಹರ, ಸೆ. 7- ದೇಶದ ಮಕ್ಕಳ ಭವಿಷ್ಯ ವನ್ನು ಉತ್ತಮ ರೀತಿಯಲ್ಲಿ ರೂಪಿಸುವಲ್ಲಿ ಶಿಕ್ಷ ಕರ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದು ಶಾಸಕ ಎಸ್. ರಾಮಪ್ಪ ಅಭಿಪ್ರಾಯಪಟ್ಟರು.

ನಗರದ ಗುರು ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆದರ್ಶ ಶಿಕ್ಷಕ, ತತ್ವಜ್ಞಾನಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯೆ ಎಂಬುದು ಕೇವಲ ಶ್ರೀಮಂತ ವರ್ಗ ದವರಿಗೆ ಮಾತ್ರ ಸೀಮಿತವಾಗಿರದೆ, ಎಲ್ಲಾ ವರ್ಗದವರಿಗೂ ಸರಿ ಸಮಾನವಾಗಿದೆ. ಹಣದಿಂದ ವಿದ್ಯೆ ಕೊಂಡುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳು ಶಿಕ್ಷಣ ಕಲಿಯುವಾಗ ಏಕಾಗ್ರತೆಯಿಂದ ಕಲಿತರೆ ಉನ್ನತ ಪದವಿ ಪಡೆಯಲು ಸಾಧ್ಯ. ನಮ್ಮ ತಾಲ್ಲೂಕಿನ ವಿದ್ಯಾರ್ಥಿ ತಂದೆ-ತಾಯಿ ಬಡತನ ದಲ್ಲಿದ್ದರೂ ಸಹ ಹೆಚ್ಚು ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿ ರಾಜ್ಯದ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿರು ವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸಾಧನೆ ಮತ್ತು ಅವರಲ್ಲಿ ಇರುವ ಮೌಲ್ಯಾ ಧಾರಿತ ಗುಣಗಳನ್ನು ಇಂದಿನ ಪೀಳಿಗೆಗೆ ತಿಳಿಸುವುದು ಬಹುಮುಖ್ಯವಾಗಿದೆ ಎಂದರು.

ಜೀವನದಲ್ಲಿ ದೊಡ್ಡ ಪ್ರಮಾಣದಲ್ಲಿ ಗುರಿ ಸಾಧಿಸಲು ಇಂತಹ ಮಹಾನ್ ವ್ಯಕ್ತಿಗಳು ನಡೆದು ಬಂದ ದಾರಿಯನ್ನು ನೋಡಿ ಅವರಂತೆ ನಾನು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಬೇಕು ಎಂಬ ಛಲ ವಿದ್ಯಾರ್ಥಿಗಳಿಗೆ ಹುಟ್ಟುತ್ತದೆ. ಆದ್ದರಿಂದ ಅವರೂ ಕೂಡ ಮುಂದೆ ಸಮಾಜದಲ್ಲಿ ಅಡ್ಡದಾರಿ ಕಡೆ ಗಮನ ಹರಿಸದೆ ಉತ್ತಮ ದಾರಿಯಲ್ಲಿ ಸಾಗಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಿ ಉತ್ತಮ ಜೀವನ ರೂಪಿಸಿಕೊಂಡು ಬದುಕುತ್ತಾರೆ. ಶಿಕ್ಷಣ ಪಡೆಯುವ ವೇಳೆ ಶಾಲೆ ವಿದ್ಯಾರ್ಥಿಗಳು ಹೆಚ್ಚು ಅಂಕ ಮತ್ತು ಪ್ರಶಸ್ತಿ ಪಡೆದಾಗ ಮೊದಲು ಅವರ ಶಾಲೆಯ ಶಿಕ್ಷಕರು ಹೆಚ್ಚು ಸಂತೋಷ ಪಡುತ್ತಾರೆ. ಕಾರಣ, ಆ ವಿದ್ಯಾರ್ಥಿ ಶಿಕ್ಷಕರ ಶ್ರಮದ ಫಲದಿಂದ ಹೆಚ್ಚು ಅಂಕ ಗಳಿಸಲು ಸಾಧ್ಯವಾಗಿರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಹೇಮಾ ವತಿ ಭೀಮಪ್ಪ, ತಾ.ಪಂ. ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ಉಪಾಧ್ಯಕ್ಷೆ ಜಯಮ್ಮ ಬಸವಲಿಂ ಗಪ್ಪ, ಎಪಿಎಂಸಿ ಅಧ್ಯಕ್ಷ ಹನುಮಂತ ರೆಡ್ಡಿ, ಬಿಇಓ ಬಸವರಾಜಪ್ಪ, ಬಿ.ಆರ್.ಸಿ. ಶಿವಾ ನಂದ್, ಪಿ.ಆರ್. ರಾಮಕೃಷ್ಣ, ಕೆ.ಆರ್. ವಿಶ್ವ ನಾಥ್, ಎಸ್. ಮಂಜುನಾಥ್, ಗುರುಬಸಪ್ಪ, ಸಿ.ಆರ್.  ಪರಮೇಶ್ವರಪ್ಪ, ವಿಜಯ ಮಹಾಂ ತೇಶ್, ಶಿಕ್ಷಕಾರದ ಅಂಗಡಿ ರೇವಣಸಿದ್ದಪ್ಪ, ಅಂಗಡಿ ಮಲ್ಲಿಕಾರ್ಜುನ್, ಬಸವರಾಜಯ್ಯ, ಚಂದ್ರಪ್ಪ ದೊಗ್ಗಳ್ಳಿ, ಮಂಜುನಾಥ ಬಿದರಿ, ಪ್ರಕಾಶ್, ಡಿ.ವಿ. ಡೊಂಕಪ್ಪ, ಗದಿಗೆಪ್ಪ ಹೊಸಮನೆ, ರಿಯಾಜ್ ಅಹ್ಮದ್, ಸಿದ್ದರಾಮೇಶ್, ವೀರಪ್ಪ, ತಿಪ್ಪಣ್ಣರಾಜ್, ರೇವಣ್ಣನಾಯ್ಕ, ನಿಸಾರ್ ಅಹ್ಮದ್, ಸಿದ್ದಲಿಂಗಪ್ಪ, ಶ್ರೀನಿವಾಸ, ಸಾವಿತ್ರಿಭಾಯಿ ಫುಲೆ ಶಿಕ್ಷಕಿಯರ ಸಂಘದ ಜ್ಯೋತಿ, ಪುಷ್ಪಾ, ರೇಣುಕಾಂಬ, ಉಮಾದೇವಿ ಹಾಗೂ ಇತರರು ಹಾಜರಿದ್ದರು.

Leave a Reply

Your email address will not be published.