ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ
ಪೌರ ಕಾರ್ಮಿಕರಿಗೆ ಕಿಟ್ ವಿತರಣೆ

ಪೌರ ಕಾರ್ಮಿಕರಿಗೆ ಕಿಟ್ ವಿತರಣೆ

ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಉಪಾಧ್ಯಕ್ಷರೂ, ಬಿಜೆಪಿ ಕಾನೂನು ಪ್ರಕೋಷ್ಟದ ಜಿಲ್ಲಾ ಸಂಚಾಲಕರೂ ಆದ ಹೆಚ್.ದಿವಾಕರ್ ಅವರು ತಮ್ಮ ಮಗ ಆದಿಸುಬ್ರಹ್ಮಣ್ಯನ ಹುಟ್ಟು ಹಬ್ಬವನ್ನು ಪೌರ ಕಾರ್ಮಿಕರಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ಕೊಡುವ ಮೂಲಕ ಆಚರಿಸಿದರು.

ಮಲೇಬೆನ್ನೂರು :  ಚರಂಡಿ ಸ್ವಚ್ಛತೆಗೆ ಒತ್ತಾಯ

ಮಲೇಬೆನ್ನೂರು : ಚರಂಡಿ ಸ್ವಚ್ಛತೆಗೆ ಒತ್ತಾಯ

ಮಲೇಬೆನ್ನೂರು : ಪಟ್ಟಣದ ರಾಜ ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿರುವ ಕಾರಣ ಚರಂಡಿ ನೀರು ಎಲ್ಲೆಂದರಲ್ಲಿ ಹರಿಯು ತ್ತಿದ್ದು, ಸಾರ್ವಜನಿಕರು ಪುರಸಭೆಯವರ ನಿರ್ಲ ಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಗಳಮುಖಿಯರಿಗೆ ದವಸ – ಧಾನ್ಯ

ಮಂಗಳಮುಖಿಯರಿಗೆ ದವಸ – ಧಾನ್ಯ

ಕೋವಿಡ್‌ನಿಂದ ಸಂಕಷ್ಟಕ್ಕೀಡಾಗಿರುವ ಮಂಗಳಮುಖಿಯರು ಮತ್ತು ಬಡವರಿಗೆ ದಿ. ಶಾಮನೂರು ಕಲ್ಲೇಶಪ್ಪ ಮತ್ತು ಶಾಮನೂರು ಜಯಣ್ಣ ಅವರ ಮಕ್ಕಳು ಧಾನ್ಯಗಳ ಕಿಟ್ ಗಳನ್ನು ವಿತರಿಸಿದರು.

ಶಿರಮಗೊಂಡನಹಳ್ಳಿಯಲ್ಲಿ ಲಸಿಕೆ

ಶಿರಮಗೊಂಡನಹಳ್ಳಿಯಲ್ಲಿ ಲಸಿಕೆ

ಸಮೀಪದ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ 45 ವರ್ಷ ಮೇಲ್ಪಟ್ಟ 100 ಜನರಿಗೆ ಕೊರೊನಾ ಲಸಿಕೆ ನೀಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹದಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶಿರಮಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹರಿಹರದ ಶ್ರೀನಿವಾಸ್ ಸ್ನೇಹಿತರ ಬಳಗದಿಂದ ದಾಸೋಹ ಸೇವೆ

ಹರಿಹರದ ಶ್ರೀನಿವಾಸ್ ಸ್ನೇಹಿತರ ಬಳಗದಿಂದ ದಾಸೋಹ ಸೇವೆ

ಹರಿಹರ : ಕೊರೊನಾ ನಿಯಂತ್ರಿಸಲು ಹಗಲಿರುಳು ಶ್ರಮ ವಹಿಸುತ್ತಿರುವ ಆರೋಗ್ಯ ಇಲಾಖೆ, ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಎನ್.ಹೆಚ್. ಶ್ರೀನಿವಾಸ್ ಸ್ನೇಹಿತರ ಬಳಗದ ವತಿಯಿಂದ ನಗರದ ಪೊಲೀಸ್ ಠಾಣೆ ಆವರಣದಲ್ಲಿ ಬೆಳಗ್ಗೆ ಉಪಹಾರ ಮತ್ತು ಮಧ್ಯಾಹ್ನದಲ್ಲಿ ಊಟದ ವ್ಯವಸ್ಥೆ ಮಾಡಲಾಯಿತು.

ಬಿರುಗಾಳಿ ಸಹಿತ ಮಳೆ: ಅಪಾರ ನಷ್ಟ

ಬಿರುಗಾಳಿ ಸಹಿತ ಮಳೆ: ಅಪಾರ ನಷ್ಟ

ಹರಪನಹಳ್ಳಿ : ತಾಲ್ಲೂಕಿನ ವಿವಿಧೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಅಕಾಲಿಕ ಮಳೆಯಿಂದ ಭಾರೀ ನಷ್ಟವಾಗಿದೆ. ತಾಲ್ಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಸುರಿದ ಮಳೆಗೆ ಭಾರೀ ಗಾತ್ರದ ಮರಗಳು ನೆಲಕ್ಕು ರುಳಿವೆ.

ಬಂಟರ ಸಂಘದಿಂದ ಮಾಸ್ಕ್ ವಿತರಣೆ

ಬಂಟರ ಸಂಘದಿಂದ ಮಾಸ್ಕ್ ವಿತರಣೆ

ದಾವಣಗೆರೆ-ಚಿತ್ರದುರ್ಗ ಬಂಟರ ಸಂಘದ ವತಿಯಿಂದ ಕೊರೊನಾ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಎನ್- 95ನ ಒಂದು ಸಾವಿರ ಮಾಸ್ಕ್ ಗಳನ್ನು ವಿತರಿಸಲಾಯಿತು. 

ಕೂಡ್ಲಿಗಿ : ಸಚಿವ ಉಮೇಶ್ ಕತ್ತಿ ವಜಾಗೆ ಆಗ್ರಹ

ಕೂಡ್ಲಿಗಿ : ರೈತನಿಗೆ ಸಾಯಿ ಹೋಗು ಎಂದು ಹೇಳಿರುವ ಆಹಾರ ಪೂರೈಕೆ ಸಚಿವ ಉಮೇಶ್ ಕತ್ತಿ ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು. 

35ನೇ ವಾರ್ಡ್‌ನಲ್ಲಿ  ಕಾರ್ಮಿಕರ ದಿನ

35ನೇ ವಾರ್ಡ್‌ನಲ್ಲಿ ಕಾರ್ಮಿಕರ ದಿನ

ವಾರ್ಡ್‍ ನಂ.35 ರಲ್ಲಿ ಕಾರ್ಮಿಕ ದಿನಾಚರಣೆಯನ್ನು ಪೌರ ಕಾರ್ಮಿಕರಿಗೆ ಹಾಗೂ ಕಟ್ಟಡ ಕಾರ್ಮಿಕರಿಗೆ ಸನ್ಮಾನ ಮಾಡುವುದರ ಮುಖಾಂತರ ಆಚರಿಸಲಾಯಿತು.

ಅಗತ್ಯ ವಸ್ತುಗಳ ಖರೀದಿ

ಅಗತ್ಯ ವಸ್ತುಗಳ ಖರೀದಿ

ಸೋಮವಾರ ದಾವಣಗೆರೆಯ ಕೆ.ಆರ್. ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ  ಜನರು ನೆರೆದಿದ್ದರು. ಅಗತ್ಯ ವಸ್ತುಗಳ ಖರೀದಿ ಜೋರಾಗಿತ್ತು.