ರಾಷ್ಟ್ರದ ಅಭಿವೃದ್ಧಿಗೆ ಬಿಜೆಪಿ ಶ್ರಮಿಸುತ್ತಿದೆ

ರಾಷ್ಟ್ರದ ಅಭಿವೃದ್ಧಿಗೆ ಬಿಜೆಪಿ ಶ್ರಮಿಸುತ್ತಿದೆ

ಹರಪನಹಳ್ಳಿಯಲ್ಲಿ ಜಿ.ಕರುಣಾಕರ ರೆಡ್ಡಿ

ಹರಪನಹಳ್ಳಿ, ಏ.6- ಕಳೆದ 4 ದಶಕಗಳಿಂದ ರಾಷ್ಟ್ರದ ಅಭಿವೃದ್ಧಿಗೆ ಬಿಜೆಪಿ ದುಡಿಯುತ್ತಾ ಬಂದಿದ್ದು, ಪಕ್ಷದ ಹಿರಿಯ ಮುಖಂಡರುಗಳು ಪಕ್ಷದ ಅಭಿವೃದ್ಧಿ ಮಾಡುತ್ತಾ ಬಂದಿದ್ದಾರೆ ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಜರುಗಿದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಪಕ್ಷದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

1951 ರಲ್ಲಿ ಶಾಮ್ ಪ್ರಸಾದ್ ಮುಖರ್ಜಿ ಅವರ ಭಾರತೀಯ ಜನತಾ ಸಂಘದಿಂದ ಬಿಜೆಪಿ ಬೆಳೆದು ಬಂದಿತು. 1977 ರಲ್ಲಿ ಹಲವು ಪಕ್ಷಗಳು ವಿಲೀನ ಗೊಂಡು ಜನತಾ ಪಕ್ಷ ಹುಟ್ಟಿಕೊಂಡಿತು. 1980 ರಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ತನ್ನ ಸದಸ್ಯ ರನ್ನು ಉಭಯ ಸದಸ್ಯರಂತೆ ಇರಲು ಸೂಚಿಸಿತು. 1980 ರ ಏಪ್ರಿಲ್ 6 ರಂದು ಬಿಜೆಪಿ ಅಸ್ತಿತ್ವಕ್ಕೆ  ಬಂತು ಎಂದರು.

  ಬಿಜೆಪಿ  ನೇತೃತ್ವದ ಕೇಂದ್ರ ಹಾಗೂ ರಾಜ್ಯ  ಸರ್ಕಾರಗಳು  ದೇಶ ಹಾಗೂ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿವೆ, ಕೋವಿಡ್ ನಂತಹ ಸಂಕಷ್ಟದಲ್ಲೂ  ಜನರ ಯೋಗ ಕ್ಷೇಮಕ್ಕೆ ಕಾಳಜಿ ವಹಿಸಲಾಗಿದೆ. ಬಿಜೆಪಿ ಕಾರ್ಯಕರ್ತರು ಪಕ್ಷದ ತತ್ವ, ಸಿದ್ಧಾಂತಗಳನ್ನು  ಮನೆ ಮನೆಗಳಿಗೆ ತಲುಪಿಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.

 ಹರಪನಹಳ್ಳಿ ಉಸ್ತುವಾರಿ ವಿಜಯಕುಮಾರ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ  ನಿಟ್ಟೂರು ಸಣ್ಣ ಹಾಲಪ್ಪ, ಜಿಲ್ಲಾ ಬಿಜೆಪಿ ಎಸ್.ಟಿ. ಘಟಕದ ಆರ್. ಲೋಕೇಶ್‌, ಪುರಸಭಾ ಅಧ್ಯಕ್ಷ  ಮಂಜುನಾಥ ಇಜಂತಕರ್ ,ಸದಸ್ಯರುಗಳಾದ ಎಚ್.ಎಂ. ಅಶೋಕ್, ಕಿರಣ ಶಾನುಭಾಗ, ವಿನಯಕುಮಾರ, ದ್ಯಾಮಜ್ಜಿ ರೊಕ್ಕಪ್ಪ, ಎಂ.ಕೆ.ಜಾವೇದ್ ಮುಖಂಡರಾದ ಎಂ.ಪಿ.ನಾಯ್ಕ, ಶಿರಗನಹಳ್ಳಿ ವಿಶ್ವನಾಥ, ಬಾಗಳಿ ಕೊಟ್ರೇಶಪ್ಪ, ಆರ್. ಕರಿಗೌಡ, ರಾಘವೇಂದ್ರ ಶೆಟ್ಟಿ,  ಬಿ.ವೈ. ವೆಂಕಟೇಶ್‌ ನಾಯ್ಕ, ಹನುಮಂತಪ್ಪ, ಎಸ್.ರಾಜೇಂದ್ರ, ಯು.ಪಿ. ನಾಗರಾಜ್‌, ಸಂತೋಷ ಹಾಗೂ ಇನ್ನಿತರರಿದ್ದರು.

Leave a Reply

Your email address will not be published.