ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಹರಿಹರ, ಏ.6- ಭಾರತೀಯ ಜನತಾ ಪಕ್ಷ ಸ್ಥಾಪನೆಯಾಗಿ ಇಂದಿಗೆ 40 ವರ್ಷಗಳು ಪೂರೈಸಿದೆ. ಭಾರತದಲ್ಲಿ ಸ್ವಾತಂತ್ರ್ಯ ನಂತರ ಅಸ್ತಿತ್ವಕ್ಕೆ ಬಂದಿರುವ ಯಾವ ಪಕ್ಷಗಳೂ ಇಷ್ಟು ಕಡಿಮೆ ಅವಧಿಯಲ್ಲಿ ವ್ಯಾಪಕವಾಗಿ ಬೆಳೆದಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಮಾತ್ರ ಇಂದು ವಿಶ್ವದ ಅತ್ಯಂತ ದೊಡ್ಡ ಸಂಘಟನೆಯಾಗಿದೆ ಎಂದು ದೂಡಾ ಸದಸ್ಯ ರಾಜು ರೋಖಡೆ ಹೇಳಿದರು.

ನಗರದ ಲೇಬರ್ ಕಾಲೋನಿಯ ಶಕ್ತಿ ಕೇಂದ್ರ ಪ್ರಮುಖರ ಮನೆಯಲ್ಲಿ ಪಕ್ಷದ ಬಾವುಟ ಹಾರಿಸುವುದರ ಮೂಲಕ ಬಿಜೆಪಿ ಪಕ್ಷದ ಸಂಸ್ಥಾಪನಾ ದಿನ ಆಚರಿಸಿ ಅವರು ಮಾತನಾಡಿದರು.

ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿಯವರಂತಹ  ಅಗ್ರಮಾನ್ಯ ವ್ಯಕ್ತಿಗಳನ್ನು ದೇಶಕ್ಕೆ ಕೊಟ್ಟ ಕೀರ್ತಿ ನಮ್ಮ ಪಕ್ಷಕ್ಕೆ ಸಲ್ಲುತ್ತದೆ. ಇದಕ್ಕೆ ಪಕ್ಷದ ಹಿರಿಯರಾದ ಸ್ವರ್ಗೀಯ ಪಂಡಿತ್  ದೀನದಯಾಳ್ ಉಪಾಧ್ಯಾಯ ಹಾಗೂ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರೇ ಮೂಲ ಪ್ರೇರಣಾ ಶಕ್ತಿ ಎಂದರು.

ನಗರ ಘಟಕದ ಉಪಾಧ್ಯಕ್ಷ ತುಳಜಪ್ಪ ಭೂತೆ ಮಾತನಾಡಿ, ರಾಜಕಾರಣ ಉದ್ಯೋಗವಲ್ಲ. ಬದಲಾಗಿ ದೇಶ ಸೇವೆಯ ಒಂದು ಮಹತ್ತರ ಭಾಗ ಎನ್ನುವುದು ಬಿಜೆಪಿ ತತ್ವ, ಸಿದ್ಧಾಂತ ಎಂದರು. ಕಾರ್ಯಕರ್ತರಿಂದಲೇ ನಡೆಯುವಂತಹ ಪಕ್ಷ ನಮ್ಮದಾಗಿದೆ ಎಂದರು.

ನಗರ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಮಂಜಾನಾಯ್ಕ, ಮಾರುತಿ ಶೆಟ್ಟಿ, ಮುಖಂಡರಾದ ಹೆಚ್. ಗಿರೀಶ್, ಅಮರ್, ಸುರೇಶ್ ಹಂಸಾಗಾರ್, ಅಜರುದ್ದೀನ್, ಸುಧೀಂದ್ರ, ಪಿ. ರಾಘು, ಹರೀಶ್, ಅಜಯ್ ಇನ್ನಿತರರಿದ್ದರು.

Leave a Reply

Your email address will not be published.