ಹಡಗಲಿ: ಚೆನ್ನಮ್ಮ ಬ್ಯಾಂಕ್ ನಿರ್ದೇಶಕ ನಂದೀಶ್ ಆತ್ಮಹತ್ಯೆ

ಹೂವಿನಹಡಗಲಿ, ಏ.2- ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಬ್ಯಾಂಕ್ ನಿರ್ದೇಶಕ ನಂದೀಶ್ ಪಾಟೀಲ್ ತೊಂಡಿಹಾಳ್ (44) ಅವರು ಗುರುವಾರ ಸಂಜೆ ತಮ್ಮ ಮನೆಯ ಕೊಠಡಿಯಲ್ಲಿ ಉಟ್ಟುಕೊಂಡಿದ್ದ ಲುಂಗಿಯನ್ನು ಫ್ಯಾನ್‌ಗೆ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂದೀಶ್ ಇತ್ತೀಚೆಗೆ ನಡೆದ ಬಳ್ಳಾರಿ ವಿ.ವಿ. ಸಂಘದ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಸೊಪ್ಪಿನ ಕಾಳಮ್ಮ ಬಡಾವಣೆಯಲ್ಲಿರುವ ನಂದೀಶ್ ಮನೆಗೆ ಪೊಲೀಸರು ಭೇಟಿ ನೀಡಿದ್ದು, ಡೆತ್‌ನೋಟ್ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಕುಟುಂಬ ಕಲಹ ಕಾರಣ ಎಂದು ತಿಳಿದು ಬಂದಿದೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.