ಡಿಎಆರ್ ತಂಡಕ್ಕೆ ಸಮಗ್ರ ಪ್ರಶಸ್ತಿ

ಡಿಎಆರ್ ತಂಡಕ್ಕೆ ಸಮಗ್ರ ಪ್ರಶಸ್ತಿ

ಜಿಲ್ಲಾ ಪೊಲೀಸ್ ಕ್ರೀಡಾಕೂಟದ ಸಮಾರೋಪ

ದಾವಣಗೆರೆ, ಮಾ.13- ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಶನಿವಾರ ಸಂಜೆ ಸಮಾರೋಪಗೊಂಡಿತು.

 ಡಿ.ಎ.ಆರ್. ತಂಡ ಸಮಗ್ರ ಪ್ರಶಸ್ತಿ ಪಡೆಯಿತು. ಪುರುಷರ ಚಾಂಪಿಯನ್ ವಿಭಾಗದಲ್ಲಿ ಡಿ.ಎ.ಆರ್.ನ ಎ.ಪಿ. ಜಯ್ಯಣ್ಣ, ದಾವಣಗೆರೆ ನಗರ ಉಪ ವಿಭಾಗದ ಮಹಾಂತೇಶ ಬಿದರಿ ಪ್ರಶಸ್ತಿ ಪಡೆದರು. ಆರ್.ಎಂ.ಸಿ. ಠಾಣೆಯ ಎಲ್.ಸರಸ್ವತಿ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದರು.

ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಡಿಎಆರ್ ಪ್ರಥಮ ಸ್ಥಾನ ಪಡೆದರೆ, ನಗರ ಉಪ ವಿಭಾಗ ಠಾಣೆ ದ್ವಿತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡಿತು.

ಕಬಡ್ಡಿ ಹಾಗೂ ವಾಲಿಬಾಲ್ ಸ್ಪರ್ಧೆಯಲ್ಲಿ ಡಿ.ಎ.ಆರ್. ಪ್ರಥಮ, ನಗರ ಉಪ ವಿಭಾಗ ದ್ವಿತೀಯ, ಕ್ರಿಕೆಟ್‌ ಹಾಗೂ 4×100 ರಿಲೇ ಓಟದಲ್ಲಿ ನಗರ ಉಪ ವಿಭಾಗ ಪ್ರಥಮ, ಡಿಎಆರ್ ದ್ವಿತೀಯ ಸ್ಥಾನ ಪಡೆದವು.

ಪುರುಷರ 100 ಮೀಟರ್ ಓಟದಲ್ಲಿ ಅಜ್ಗರ್ ಅಲಿ ಪ್ರಥಮ, ಸನಾವುಲ್ಲಾ ದ್ವಿತೀಯ ಅರುಣ್ ತೃತೀಯ ಸ್ಥಾನ ಪಡೆದರೆ, ಮಹಿಳೆಯರ 100 ಮೀಟರ್ ಓಟದಲ್ಲಿ ಮಾಲತಿ ಬಾಯಿ ಪ್ರಥಮ, ಸರಸ್ವತಿ ದ್ವಿತೀಯ, ಮಧುರ ತೃತೀಯ ಸ್ಥಾನ ಪಡೆದರು.  ರೈಫಲ್ ಶೂಟಿಂಗ್‌ನಲ್ಲಿ ಹೆಚ್.ವೇದಮೂರ್ತಿ ಹಾಗೂ ಮಹಿಳೆಯರ ವಿಭಾಗದಲ್ಲಿ ಹೆಚ್.ಹೆಚ್. ಲಕ್ಷ್ಮಿದೇವಿ ಪ್ರಥಮ ಸ್ಥಾನ ಪಡೆದಿದ್ದಾರೆ.

Leave a Reply

Your email address will not be published.