ಜೈನ ಸಮುದಾಯದಿಂದ ಕೋವಿಡ್ ಕೇರ್ ಸೆಂಟರ್: ಶ್ಲಾಘನೀಯ ಕಾರ್ಯ

ಮಾನ್ಯರೇ,

ಜೈನ ಸಮುದಾಯದವರು ಆವರಗೆರೆ ಬಳಿ ಸುಸಜ್ಜಿತವಾದ ಕೋವಿಡ್ ಕೇರ್ ಸೆಂಟರ್ ತೆರೆದಿರುವುದು ನಿಜಕ್ಕೂ ಪ್ರಶಂಸನೀಯ ವಾಗಿದ್ದು, ಇತರೆ ಸಮುದಾಯದವರಿಗೆ ಪ್ರೇರಣೆಯಾಗಲಿ.

ಇದೇ ರೀತಿ ಬಹಳಷ್ಟು ಸಮುದಾಯದವರು ತಮ್ಮ ಸಮಾಜದ ಸದಸ್ಯರಿಗೆ ಈ ರೀತಿಯ ಸೌಲಭ್ಯ ಒದಗಿಸುವುದು ಇಂದಿನ ಅತ್ಯವಶ್ಯಕ ಸೇವೆಯಾಗಿದೆ. ಬೇರೆ ಯಾವುದೋ ಅನವಶ್ಯಕ ಕಾರ್ಯಗಳನ್ನು ಮಾಡುವ ಬದಲು ಈ ರೀತಿಯ ಸೇವಾ ಕಾರ್ಯವನ್ನು ಮಾಡಿದಲ್ಲಿ ಜನರ ಆರೋಗ್ಯ ಮತ್ತು ಜೀವವನ್ನು ಕಾಪಾಡಿದಂತಾಗುತ್ತದೆ.

ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಇರುವ ಈ ಸಂದರ್ಭದಲ್ಲಿ ಆಸ್ಪತ್ರೆಗಳ ಒತ್ತಡವನ್ನು ಕಡಿಮೆ ಮಾಡಿದಂತಾಗುತ್ತದೆ. ಎಲ್ಲ ಸಮುದಾಯದ ಸದಸ್ಯರು ಮತ್ತು ಮುಖಂಡರು ಈ ರೀತಿಯ ಕಾರ್ಯವನ್ನು ಅತಿ ಶೀಘ್ರದಲ್ಲೇ ಪ್ರಾರಂಭಿಸುವರೆಂದು ಆಶಿಸೋಣ.

– ಐಗೂರು ಸಿ. ಪ್ರಭು, ದಾವಣಗೆರೆ.

Leave a Reply

Your email address will not be published.