ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ಜಿಲ್ಲಾ ಕಸಾಪ ಚುನಾವಣೆ : ಅಂತಿಮ ಕಣದಲ್ಲಿ ಇಬ್ಬರು

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಬರುವ ಮೇ 9ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ 8 ಜನರ ಪೈಕಿ 6 ಜನರು ತಮ್ಮ ಉಮೇದುವಾರಿಕೆ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಇದರಿಂದಾಗಿ ಅಂತಿಮ ಕಣದಲ್ಲಿ ಇಬ್ಬರು ಉಳಿದಿದ್ದಾರೆ. 

ಕುಂದುವಾಡ ಕೆರೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕ

ಸಂಸದರು ಹಾಗೂ ಜಿಲ್ಲಾಧಿ ಕಾರಿ, ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಕುಂದುವಾಡ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪರಿವೀಕ್ಷಿಸಿ, ಕೆರೆ ಅಭಿವೃದ್ಧಿ ಸರಿ ಇದೆ ಎಂದು ಸರ್ಟಿಫಿಕೇಟ್ ನೀಡಿರುವುದನ್ನು ಯುವ ಭಾರತ ಗ್ರೀನ್ ಬ್ರಿಗೇಡ್‌ನ ಅಧ್ಯಕ್ಷ ನಾಗರಾಜ್ ಸುರ್ವೆ ಖಂಡಿಸಿದ್ದಾರೆ.

ದಾವಣಗೆರೆ ಅರ್ಬನ್ ಬ್ಯಾಂಕಿಗೆ 9.19 ಕೋಟಿ ರೂ. ಲಾಭ

ರಾಜ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲೊಂದು ಎಂಬ ಹೆಗ್ಗಳಿಕೆಯೊಂದಿಗೆ ಮುನ್ನಡೆದಿರುವ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, 2021, ಮಾರ್ಚ್ ಅಂತ್ಯಕ್ಕೆ 9.19 ಕೋಟಿ ರೂ. ಲಾಭ ಗಳಿಸಿರುವ ಬಗ್ಗೆ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.

ದಿ ತುಂಗಭದ್ರ ಕ್ರೆಡಿಟ್ ಸೊಸೈಟಿಗೆ 3.32 ಕೋಟಿ ರೂ. ಲಾಭ

ಹರಿಹರ : ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲೊಂದಾದ ನಗರದ ದಿ ತುಂಗಭದ್ರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಮುಕ್ತಾಯಗೊಂಡ ಆರ್ಥಿಕ ವರ್ಷ 2020-21 ನೇ ಸಾಲಿನಲ್ಲಿ 3.32 ಕೋಟಿ ರೂ. ಲಾಭ ಗಳಿಸಿದೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಡಿ. ಹೇಮಂತ್ ರಾಜ್ ತಿಳಿಸಿದ್ದಾರೆ.

ಏ.19 ರಿಂದ ಹೊಲಿಗೆ ತರಬೇತಿ ಶಿಬಿರ

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಜಿಲ್ಲಾ ಪಂಚಾಯತ್ ದಾವಣಗೆರೆ ಸಂಯುಕ್ತಾ ಶ್ರಯದಲ್ಲಿ ಜಿಲ್ಲೆಯ ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಮಟ್ಟದ ಮಹಿಳೆಯರಿಗಾಗಿ 30 ದಿನಗಳ ಹೊಲಿಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ವಿಜಯನಗರ ಸಂಸ್ಥಾಪನಾ ದಿನಾಚರಣೆಗೆ ಅವಕಾಶ ನೀಡದಿರಲು ಮನವಿ

ಹರಪನಹಳ್ಳಿ : ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಹಕ್ಕಬುಕ್ಕರ ಸವಿನೆನಪು ಹಾಗೂ ಹಾಲುಮತ ಸಮಾಜದ ಸಂಸ್ಕೃತಿ ಬಿಂಬಿ ಸುವ ನಿಟ್ಟಿನಲ್ಲಿ ವಿಜಯನಗರ ಸಂಸ್ಥಾಪನಾ ದಿನದ ಆಚರಣೆ  ನಡೆಸಲು ಅವಕಾಶ ನೀಡಬಾರದು

ಪಡಿತರ ಚೀಟಿಯಿಂದ ಮೃತ ವ್ಯಕ್ತಿಗಳ ಹೆಸರು ತೆಗೆಸಲು ಸೂಚನೆ

ಪಡಿತರ ಚೀಟಿಯಲ್ಲಿ ಸೇರ್ಪಡೆಯಾಗಿರುವ ಯಾವುದೇ ವ್ಯಕ್ತಿ ಮೃತರಾಗಿದ್ದಲ್ಲಿ ಅಂತಹ ವ್ಯಕ್ತಿಗಳ ಹೆಸರುಗಳನ್ನು ಪಡಿತರ ಚೀಟಿಯಿಂದ ತೆಗೆಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದ್ದಾರೆ.

ಕಲಾಕುಂಚದಿಂದ ನಾಳೆ ರಾಜ್ಯಮಟ್ಟದ ಯುಗಾದಿ ಕವಿಗೋಷ್ಠಿ

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಯುಗಾದಿ ಕವಿಗೋಷ್ಠಿಯನ್ನು ದಾವಣಗೆರೆಯ ಡಯಟ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ

ಕುಂದುವಾಡ ಕೆರೆಯ ಹೂಳನ್ನು ತುಂಬಿಕೊಂಡು ಹೋಗಲು ರೈತರಿಗೆ ಅವಕಾಶ

ಸ್ಮಾರ್ಟ್ ಸಿಟಿ ವತಿಯಿಂದ  ಮಹಾನಗರ ಪಾಲಿಕರ ವ್ಯಾಪ್ತಿಯ ಕುಂದುವಾಡ ಕೆರೆ ಅಭಿವೃದ್ದಿ ಕಾಮಗಾರಿ ನಡೆಸಲಾಗುತ್ತಿದ್ದು, ರೈತರು  ಕೆರೆಯಲ್ಲಿನ ಹೂಳನ್ನು ಯಾವುದೇ ವೆಚ್ಚ ನೀಡದೆ ತೆಗೆದು ಕೊಂಡು ಹೋಗಬಹುದಾಗಿದೆ.

ವಾಣಿಜ್ಯ ಉದ್ದಿಮೆಗಳ ತ್ಯಾಜ್ಯ ಸಂಗ್ರಹ, ವಿಲೇವಾರಿ ಜವಾಬ್ದಾರಿ ಸ್ವಯಂ ಸೇವಾ ಸಂಸ್ಥೆಗಳಿಗೆ

ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ವಾಣಿಜ್ಯ ಉದ್ದಿಮೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವ ಕಾರ್ಯವನ್ನು ಆಯ್ದ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಲಾಗಿದೆ ಎಂದು ಆಯುಕ್ತ ವಿಶ್ವನಾಥ ಮುದಜ್ಜಿ ತಿಳಿಸಿದ್ದಾರೆ.

ಬೀರಲಿಂಗೇಶ್ವರ ದೇವಸ್ಥಾನದ ಜಾಗದ ಅಭಿವೃದ್ಧಿಯ ನೂತನ ಟ್ರಸ್ಟ್‌ಗೆೆ ಆಗ್ರಹ

ಕೇವಲ ಐದು ಜನಗಳ ಹೆಸರಿನಲ್ಲಿ ಇರುವ ನಗರದ ಪಿ.ಬಿ. ರಸ್ತೆಯಲ್ಲಿನ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಜಾಗದ ಅಭಿವೃದ್ಧಿ ಟ್ರಸ್ಟ್‍ ರದ್ದುಪಡಿಸಿ, ಸಮಾಜದ ಸದಸ್ಯರನ್ನೊಳಗೊಂಡ ನೂತನ ಟ್ರಸ್ಟ್ ರಚನೆಗೆ ಕನಕ ಗುರುಪೀಠದ ಸ್ವಾಮಿಗಳು ಮುಂದಾಗಬೇಕೆಂದು ಮನವಿ ಮಾಡಿದರು.

11ರಂದು ಕೆ-ಸೆಟ್ ಪರೀಕ್ಷೆ

ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯನ್ನು ಇದೇ ದಿನಾಂಕ 11ರ ಭಾನುವಾರ ನಡೆಸಲಾಗುತ್ತಿದೆ. ದಾವಣಗೆರೆ ನಗರದಲ್ಲಿ ಒಟ್ಟು 9 ಕೇಂದ್ರಗಳಲ್ಲಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಸಾರಿಗೆ ನೌಕರರಿಗೆ 6 ನೇ ವೇತನ ಆಯೋಗ ಜಾರಿಗೊಳಿಸಲು ಆಗ್ರಹ

ರಾಜ್ಯ ರಸ್ತೆ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಯಾದ 6 ನೇ ವೇತನ ಆಯೋಗದ ಜಾರಿಗೆ ರಾಜ್ಯ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ರಾಜ್ಯ ವಕ್ತಾರ ಡಿ.ಬಸವರಾಜ್ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ. 

ರಫೇಲ್ ಯುದ್ಧ ವಿಮಾನ ಖರೀದಿ : ತನಿಖೆಗೆ ಆಗ್ರಹ

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿರುವ ಅವ್ಯವಹಾರವನ್ನು ಸಿಬಿಐ, ದೇಶದ ಉನ್ನತ ತನಿಖಾ ಸಂಸ್ಥೆಗಳು, ಸರ್ವೋಚ್ಛ ನ್ಯಾಯಾಲಯದ ನಿ. ನ್ಯಾಯಮೂರ್ತಿಗಳ ಇಲ್ಲವೇ ಹಾಲಿ ನ್ಯಾಯಮೂರ್ತಿ ಗಳಿಂದ ತನಿಖೆ ನಡೆಸಿ ನಿಜಾಂಶ ಬಯಲಿಗೆ ಎಳೆಯುವಂತೆ ಒತ್ತಾಯಿಸಿದರು.

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಎಸ್‌4 ನಿಂದ ಸಿಎಂ ಗೆ ಮನವಿ

ಹರಿಹರ : ಒಳಮೀಸಲಾತಿ ವರ್ಗೀಕರಣ ಮಾಡುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ತಾಲ್ಲೂಕಿನ ಡಿಎಸ್4 ಕರ್ನಾಟಕ ತಾಲ್ಲೂಕು  ಸಮಿತಿ ಅಧ್ಯಕ್ಷ ಎಂ. ಮಂಜುನಾಥ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು.

ಬಿಐಇಟಿ ಕಾಲೇಜಿನ 24 ಪ್ರಾಜೆಕ್ಟ್‌ಗಳು ಹಣಕಾಸಿನ ನೆರವಿಗೆ ಆಯ್ಕೆ

ನಗರದ ಬಿಐಇಟಿ ಕಾಲೇಜಿನ ವಿದ್ಯಾರ್ಥಿಗಳ 24 ಪ್ರಾಜೆಕ್ಟ್‌ಗಳು ಉತ್ತಮ ಎಂದು ಪರಿಗಣಿಸಲ್ಪಟ್ಟು, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ನೀಡುವ ಹಣಕಾಸಿನ ನೆರವಿಗೆ ಆಯ್ಕೆಯಾಗಿವೆ.

ರವಿ ಕೆ. ಅಂಬೇಕರ್‌ ಅವರಿಗೆ ಪ್ರಶಸ್ತಿ

ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತು ಹಾಗೂ ಚಿನ್ಮೂ ಲಾದ್ರಿ ಸಾಹಿತ್ಯ ವೇದಿಕೆ ಚಿತ್ರದುರ್ಗ ಇವರ ಸಹಯೋಗದಲ್ಲಿ ಜಿಲ್ಲಾ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ದಲ್ಲಿ ಯೋಗ ಗುರು ರವಿ ಕೆ. ಅಂಬೇಕರ್‌ಗೆ `ಕನ್ನಡ ಸೇವಾರತ್ನ ಪ್ರಶಸ್ತಿ' ನೀಡಿ ಗೌರವಿಸಲಾಯಿತು.

ಜಿ.ಪಂ., ತಾ.ಪಂ. ಗೆಲುವಿಗೆ ಮಹತ್ವದ ಪಾತ್ರ

ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಮಹತ್ವದ ಪಾತ್ರ ವಹಿಸಲಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಿಖಿಲ್ ಆರ್. ಕೊಂಡಜ್ಜಿ ತಿಳಿಸಿದರು.

ಶಾಸಕ ಬಸನಗೌಡ ಯತ್ನಾಳ್ ಅರಿವೆ ಹಾವು ಬಿಡುತ್ತಿದ್ದಾರೆ

ಮಲೇಬೆನ್ನೂರು : ಶಾಸಕ ಬಸನಗೌಡ ಯತ್ನಾಳ್ ದುರಂತ, ದುರಹಂಕಾರಿ ನಾಯಕನಾಗಿದ್ದು, ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಲು 65 ಶಾಸಕರು ಸಹಿ ಮಾಡಿದ್ದಾರೆ. ಅವರನ್ನು  ಪಕ್ಷಕ್ಕೆ ವಾಪಸ್‌ ಕರೆತಂದ ತಪ್ಪಿಗೆ ಯಡಿಯೂರಪ್ಪನವರಿಗೆ ಇಂತಹ ಗಿಫ್ಟ್ ಕೊಡುತ್ತಿದ್ದಾರೆ

ಗರ್ಭಕೋಶದಲ್ಲಿ ಬೆಳೆದಿದ್ದ 18.4 ಕೆಜಿ ತೂಕದ ಗಡ್ಡೆ

ಗರ್ಭಕೋಶದಲ್ಲಿ ಬೆಳೆದಿದ್ದ 18.4 ಕೆಜಿ ತೂಕದ ಗಡ್ಡೆಯನ್ನು ಯಶಸ್ವೀ ಶಸ್ತ್ರ ಚಿಕಿತ್ಸೆ ನಡೆಸಿ ಇಲ್ಲಿನ ಜಿಲ್ಲಾಸ್ಪತ್ರೆಯ ವೈದ್ಯರ ತಂಡ ಮಹಿಳೆಗೆ ಮರು ಜನ್ಮ ನೀಡಿರುವ ಘಟನೆ ನಡೆದಿದೆ. 

ರಾಣೇಬೆನ್ನೂರು ತಾ.ಪಂ. ಕ್ಷೇತ್ರಗಳ ಸಂಖ್ಯೆ 23 ರಿಂದ 19 ಕ್ಕೆ ಇಳಿಕೆ

ರಾಣೇಬೆನ್ನೂರು ತಾಲ್ಲೂಕಿನಲ್ಲಿ ಮೊದಲಿದ್ದ 23 ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳನ್ನು ಪುನರ್ ವಿಂಗಡನೆ ಮಾಡಿ 19 ಕ್ಷೇತ್ರಗಳನ್ನಾಗಿ ಮಾಡಲಾಗಿದ್ದು, ಪಂಚಾಯ್ತಿವಾರು ಗ್ರಾಮಗಳನ್ನು  ಕೆಳಗಿನಂತೆ ಸೇರಿಸಿ ಸರ್ಕಾರ ಗೆಜೆಟ್ ಹೊರಡಿಸಿದೆ.

ಏಪ್ರಿಲ್ ಮಧ್ಯಾವಧಿಯಲ್ಲಿ ಕೊರೊನಾ ಗರಿಷ್ಠ ಹಂತಕ್ಕೆ

ಏಪ್ರಿಲ್ ಮಧ್ಯಾವಧಿಯಲ್ಲಿ ಕೊರೊನಾ ಎರಡನೇ ಅಲೆ ಉತ್ತುಂಗಕ್ಕೆ ತಲುಪಲಿದೆ ಎಂದು ಹಲವಾರು ವಿಜ್ಞಾನಿಗಳು ಗಣಿತದ ಮಾದರಿಗಳನ್ನು ಬಳಸಿ ಅಂದಾಜಿಸಿದ್ದಾರೆ. ಮೇ ತಿಂಗಳ ಅಂತ್ಯದಲ್ಲಿ ಸೋಂಕುಗಳಲ್ಲಿ ಗಣನೀಯ ಇಳಿಕೆಯಾಗಲಿದೆ ಎಂದವರು ಹೇಳಿದ್ದಾರೆ.

ಸಾಮೂಹಿಕ ಹೊಣೆಗಾರಿಕೆ ಇಲ್ಲದ ಸರ್ಕಾರ ಹೋಗಲಿ

ದಾವಣಗೆರೆ, ಏ. 3 - ರಾಜ್ಯ ಸರ್ಕಾರದಲ್ಲಿ ಸಾಮೂಹಿಕ ಹೊಣೆಗಾರಿಕೆ ಇಲ್ಲದಂತಾಗಿದೆ. ಒಬ್ಬರ ಮೇಲೊಬ್ಬರಿಗೆ ವಿಶ್ವಾಸ ಇಲ್ಲ. ಇಂತಹ ಸರ್ಕಾರ ಹೋಗಬೇಕು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.