ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ
ಸಾರಿಗೆ ನೌಕರರ ಪತ್ನಿಯರಿಂದ ತಹಶೀಲ್ದಾರ್‌ಗೆ ಮನವಿ

ಸಾರಿಗೆ ನೌಕರರ ಪತ್ನಿಯರಿಂದ ತಹಶೀಲ್ದಾರ್‌ಗೆ ಮನವಿ

ಹರಿಹರ : ನಗರದ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕರು ಸಾರಿಗೆ ನೌಕರರನ್ನು ಅಸಭ್ಯವಾಗಿ ನಡೆಸಿಕೊಳ್ಳುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಸಾರಿಗೆ ನೌಕರರ ಪತ್ನಿಯರು ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ಅವರಿಗೆ ಮನವಿ ಅರ್ಪಿಸಿದರು.

ಯಲವಟ್ಟಿ: 17 ಕ್ಕೆ ಗ್ರಾಮ ವಾಸ್ತವ್ಯ – ಸ್ಥಳ ಪರಿಶೀಲನೆ

ಯಲವಟ್ಟಿ: 17 ಕ್ಕೆ ಗ್ರಾಮ ವಾಸ್ತವ್ಯ – ಸ್ಥಳ ಪರಿಶೀಲನೆ

ಮಲೇಬೆನ್ನೂರು : ಯಲವಟ್ಟಿ ಗ್ರಾಮ ದಲ್ಲಿ ಇದೇ ಏ.17ರ ಶನಿವಾರ ತಹಶೀಲ್ದಾರ್ ಕೆ.ಬಿ. ರಾಮ ಚಂದ್ರಪ್ಪ ಅವರ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪೂರ್ವ ಭಾವಿಯಾಗಿ ಉಪತಹಶೀ ಲ್ದಾರ್ ಆರ್. ರವಿ ಅವರು ಇಂದು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಹರಿಹರ ತಾ. : 56 ಹಳ್ಳಿಗಳ ಪ್ರತಿ ಮನೆಗೂ ಕುಡಿಯುವ ನೀರಿನ ಸಂಪರ್ಕ

ಹರಿಹರ ತಾ. : 56 ಹಳ್ಳಿಗಳ ಪ್ರತಿ ಮನೆಗೂ ಕುಡಿಯುವ ನೀರಿನ ಸಂಪರ್ಕ

ಮಲೇಬೆನ್ನೂರು, ಏ.12- ಹೊಸಹಳ್ಳಿ ಮತ್ತು ಕಮಲಾಪುರ ಗ್ರಾಮಗಳಲ್ಲಿ ಪ್ರತಿ ಮನೆಗೂ ಕುಡಿಯುವ ನೀರು ಪೂರೈಸುವ ಸುಮಾರು 56 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕ ಎಸ್‌. ರಾಮಪ್ಪ ಅವರು ಸೋಮವಾರ ಹೊಸಹಳ್ಳಿ ಗ್ರಾಮದಲ್ಲಿ ಗುದ್ದಲಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ಚಿನ್ನದ ಪದಕ ಪಡೆದ ಹೈದರಾಲಿಗೆ ಸನ್ಮಾನ

ಚಿನ್ನದ ಪದಕ ಪಡೆದ ಹೈದರಾಲಿಗೆ ಸನ್ಮಾನ

ಹರಿಹರ ತಾಲ್ಲೂಕು ಭಾನುವಳ್ಳಿ ಗ್ರಾಮದ ಮಹಬೂಬ್ ಸಾಬ್‍ರವರ ಪುತ್ರ ಎಂ. ಹೈದರಾಲಿಯವರು ಎಂ.ಎ. ರಾಜ್ಯಶಾಸ್ತ್ರ ವಿಭಾಗದಲ್ಲಿ ಪ್ರಥಮ ರಾಂಕ್ ಪಡೆಯುವುದರ ಜೊತೆಗೆ 2 ಚಿನ್ನದ ಪದಕಗಳನ್ನು ಗಳಿಸಿರುವ ಇವರನ್ನು ಕೆಪಿಸಿಸಿ ವಕ್ತಾರ ಡಿ.ಬಸವರಾಜ್‍ರವರು ತಮ್ಮ ಮನೆಗೆ ಆಹ್ವಾನಿಸಿ, ಅಭಿನಂದಿಸಿದರು. 

ಸಾರಿಗೆ ನೌಕರರ ಬೇಡಿಕೆ ಈಡೇರಿಸಿ

ಸಾರಿಗೆ ನೌಕರರ ಬೇಡಿಕೆ ಈಡೇರಿಸಿ

ಮಲೇಬೆನ್ನೂರು : ಆರನೇ ವೇತನ ಆಯೋಗದ ವರದಿಯಂತೆ ಸಾರಿಗೆ ನೌಕರರಿಗೆ ವೇತನ ನೀಡಬೇಕೆಂದು ರೈತ ಸಂಘದ ಹಾಳೂರು ನಾಗರಾಜ್‌ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಯೋಗ ವಿಜ್ಞಾನದಲ್ಲಿ ಸುಮನ್‌ಗೆ ಪದಕ

ಯೋಗ ವಿಜ್ಞಾನದಲ್ಲಿ ಸುಮನ್‌ಗೆ ಪದಕ

ಸುಮನ್ ಎನ್.ಎಸ್. ಇವರು ಮಾಸ್ಟರ್ ಆಫ್ ಸೈನ್ಸ್ (ಯೋಗ ವಿಜ್ಞಾನ ಪದವಿ) ಸೆಪ್ಟೆಂಬರ್/ಅಕ್ಟೋಬರ್ 2020ರ ಸಾಲಿನಲ್ಲಿ ನಡೆದ ಅಂತಿಮ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಪ್ರಥಮ ರಾಂಕ್ ಗಳಿಸಿ ಬಂಗಾರದ ಪದಕ ಪಡೆದಿದ್ದಾರೆ.

ಎಸ್ಮಾ ಜಾರಿ ಸಮಸ್ಯೆಗೆ ಪರಿಹಾರವಲ್ಲ: ರೈತ ಸಂಘ

ಎಸ್ಮಾ ಜಾರಿ ಸಮಸ್ಯೆಗೆ ಪರಿಹಾರವಲ್ಲ: ರೈತ ಸಂಘ

ರಾಣೇಬೆನ್ನೂರು : ಸಾರಿಗೆ ನೌಕರರ ಮೇಲೆ ಎಸ್ಮಾ ಜಾರಿ, ಬಲ ಪ್ರಯೋಗ, ಚಂದ್ರಶೇಖರ ಮೇಲೆ ಆಪಾದನೆ ಇದು ಪರಿಹಾರವಲ್ಲ. ಸರ್ಕಾರ ಈ ನೀತಿಯನ್ನು ಕೈಬಿಟ್ಟು ರಾಜ್ಯ ಸಾರಿಗೆ ನೌಕರರ  ಬೇಡಿಕೆಗಳನ್ನು ಪೂರೈಸುವಲ್ಲಿ ಚಿಂತಿಸಬೇಕು ಎಂದು ರಾಜ್ಯ ರೈತ ಸಂಘ ಒತ್ತಾಯಿಸಿದೆ.

ಕೊಟ್ಟೂರು : ಕೋವಿಡ್‍ ಲಸಿಕೆ ಪಡೆದುಕೊಂಡ ಪ.ಪಂ. ಅಧ್ಯಕ್ಷೆ

ಕೊಟ್ಟೂರು : ಕೋವಿಡ್‍ ಲಸಿಕೆ ಪಡೆದುಕೊಂಡ ಪ.ಪಂ. ಅಧ್ಯಕ್ಷೆ

ಕೊಟ್ಟೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಭಾರತಿ ಸುಧಾಕರ್‍ ಪಾಟೀಲ್ ಇಂದು ಕೊಟ್ಟೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್‍ ಲಸಿಕೆ ಹಾಕಿಸಿಕೊಂಡರು. 

ಮಲೇಬೆನ್ನೂರಿನಲ್ಲಿ ತಹಶೀಲ್ದಾರ್‍ ನೇತೃತ್ವದಲ್ಲಿ ಮಾಸ್ಕ್ ಹಾಕದವರಿಗೆ ದಂಡ

ಮಲೇಬೆನ್ನೂರಿನಲ್ಲಿ ತಹಶೀಲ್ದಾರ್‍ ನೇತೃತ್ವದಲ್ಲಿ ಮಾಸ್ಕ್ ಹಾಕದವರಿಗೆ ದಂಡ

ಮಲ್ಲೇಬೆನ್ನೂರು ಪಟ್ಟಣದಲ್ಲಿ ಗುರುವಾರ ಸಾಯಂಕಾಲ ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ಪಿಎಸ್‍ಐ ವೀರಬಸಪ್ಪ, ಪುರಸಭೆ ಮುಖ್ಯಾಧಿಕಾರಿ ದಿನಕರ್‌ ಅವರು ಮಾಸ್ಕ್‍ ಧರಿಸದೇ ಸುತ್ತಾಡುವ ಜನರಿಗೆ ದಂಡ ಹಾಕಿ ಅರಿವು ಮೂಡಿಸಿದರು

ಕಾಗಿನೆಲೆ ಕ್ರೆಡಿಟ್ ಕೋ ಆಪ್ ಸೊಸೈಟಿ ಪ್ರಾರಂಭ

ಕಾಗಿನೆಲೆ ಕ್ರೆಡಿಟ್ ಕೋ ಆಪ್ ಸೊಸೈಟಿ ಪ್ರಾರಂಭ

ನಗರದ ಪಿ.ಬಿ.ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ‌ ನೂತನವಾಗಿ ಪ್ರಾರಂಭಗೊಂಡ ಶ್ರೀ ಕಾಗಿನೆಲೆ ಕ್ರೆಡಿಟ್ ಕೋ ಆಪ್. ಸೊಸೈಟಿಯನ್ನು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಶುಕ್ರವಾರ ಉದ್ಘಾಟಿಸಿದರು.

ಹುತಾತ್ಮ ಯೋಧರಿಗೆ ಕಾಂಗ್ರೆಸ್ ಶ್ರದ್ಧಾಂಜಲಿ

ಹುತಾತ್ಮ ಯೋಧರಿಗೆ ಕಾಂಗ್ರೆಸ್ ಶ್ರದ್ಧಾಂಜಲಿ

ಜಗಳೂರು : ದೇಶದ ಗಡಿ ಕಾಯುವ ಯೋಧರ ರಕ್ಷಣೆಗೆ ಕೇಂದ್ರ ಸರ್ಕಾರ ಹಾಗು ರಕ್ಷಣಾ ಇಲಾಖೆ ಅತ್ಯುನ್ನತ ಭದ್ರತಾ ಸಲಕರಣೆಗಳನ್ನು ನೀಡುವ ಮೂಲಕ ಪ್ರಾಣಗಳನ್ನು ರಕ್ಷಿಸಬೇಕು ಎಂದು ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ತಿಳಿಸಿದರು.

ಹೆಚ್.ಬಿ. ಗಿರೀಶ್‌ಗೆ ಚಿನ್ನದ ಪದಕ

ಹೆಚ್.ಬಿ. ಗಿರೀಶ್‌ಗೆ ಚಿನ್ನದ ಪದಕ

ದಾವಣಗೆರೆ ವಿಶ್ವವಿದ್ಯಾ ನಿಲಯದ ವಿದ್ಯಾರ್ಥಿ ಹೆಚ್.ಬಿ. ಗಿರೀಶ್ ಅವರು ಎಂ.ಎಸ್ಸಿ. ಭೂವಿಜ್ಞಾನ ವಿಭಾಗದಲ್ಲಿ ಮೊದಲ ರಾಂಕ್ ನೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.